ಪಿತಾಜಿ.. ಮೂರು ವರ್ಷಗಳು ಕಳೆಯಿತು.. ನೀವಿಲ್ಲದೆ ಹೇಗೆ ಕಾಲ ಓಡುತ್ತಿದೆ ಎಂದೇ ತಿಳಿಯುತ್ತಿಲ್ಲ.. ಈ ಮೂರು ವರ್ಷಗಳಲ್ಲಿ, ನಿಮಗೆ ಮಾತು ಕೊಟ್ಟಿದ್ದರಲ್ಲಿ ಅಂತೂ ಒಂದನ್ನು ನೆರವೇರಿಸಿದೆ ಎಂದು ಖುಷಿ ಪಡಬೇಕಾ? ಅಥವ ಉಳಿದದ್ದನ್ನು ನೆರವೇರಿಸಲಾಗದಿದ್ದಕ್ಕೇ ನನ್ನ ಮೇಲೇ ನಾನೇ ಬೇಸರಿಸಿಕೊಳ್ಳಬೇಕೆ.. ಗೊತ್ತಾಗ್ತಿಲ್ಲ.. ಮನಸಿಗೆ ವೇದನೆ ಹೆಚ್ಚುತ್ತಲೇ ಇದೆ.. ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಮೇಲೆ ನನಗೆ ನಂಬಿಕೆ ಇಲ್ಲವಂತಾಗಿದೆ. ಹೋಗುತ್ತಿರುವ ದಾರಿ ಸರಿನಾ ತಪ್ಪಾ ಅಂತ ನಿರ್ಧಾರ ಮಾಡೋ ಸಾಮರ್ಥ್ಯಾನೆ ಕಳಕೊಂಡಿದೀನೇನೋ ಅಂತ ಅನಿಸ್ತಿದೆ.. ದಿನಗಳು ಕಳೆದಂತೆಲ್ಲ.. ನಾನು ದುರ್ಬಲನಾಗುತ್ತಿದ್ದೀನೇನೋ ಅಂತ ಅನಿಸಿಬಿಟ್ಟಿದೆ. ವರ್ಷದಿಂದ ವರ್ಷಕ್ಕೆ ಪರಿಸ್ಥಿತಿಗಳು ಪ್ರತಿಕೂಲವಾಗುತ್ತಿದೆಯೇ ಹೊರತು ಅನುಕೂಲಕರವಾಗುತ್ತಿಲ್ಲ. ಬಹುಶಃ ನನ್ನ ನಿಲುವು, ಅನಿಸಿಕೆ, ಅನುಭವ, ಸಿದ್ಧಾಂತಗಳಲ್ಲೇ ಏನೋ ತೊಂದರೆ ಇದೆಯೇನೋ ಅಂತ ಅನಿಸ್ತಿದೆ. ಇಂಥಾ ಟೈಮಲ್ಲಿ ನೀವಿರಬೇಕಿತ್ತು ಪಿತಾಜಿ.. ನಿಮ್ ಹತ್ರ ನನ್ ಎಲ್ಲಾ ನೋವು ಹೇಳ್ಕೋಬೇಕು ಅಂತ ಅನಿಸ್ತಿದೆ.. ನಿಮ್ಮನ್ನು ಗಟ್ಟಿಯಾಗಿ ತಬ್ಕೋಬೇಕು.. ನಿಮ್ಮ ಭುಜದ ಮೇಲೆ ತಲೆ ಒರಗಿಸಬೇಕು.. ನಿಮ್ಮ ಸಾಂತ್ವನದ ಮಾತುಗಳ ಕೊರತೆಯಿಂದಾಗಿ ನನ್ನ ಜೀವನದ ಗತಿಯೇ ಬದಲಾಗಿಬಿಟ್ಟಿದೆ... ಮಿಸ್ ಯು ಪಿತಾಜಿ..
//ಬಾಬು, ನಾನ್ನ
//ಬಾಬು, ನಾನ್ನ
No comments:
Post a Comment