Thursday, April 29, 2010

ಮೆಟ್ರೋ ಬ್ಯಾಂಗಲೂರಿಗೆ ಹೊಸ cultural identity "ಬೆಂಗಳೂರು"

ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ’ಬೆಂಗಳೂರು’ ಎಂದು ’ನಾಮಕರಣ" ಮಾಡಿ ಅಧಿಕೃತವಾಗಿ ಘೋಷಿಸಲಾಯಿತು.







ಈ ಮೇಲಿನ ವಾಕ್ಯವನ್ನೇ ನಾನು ಇಲ್ಲಿನ ಸ್ನೇಹಿತರ ಬಳಿ ಹೇಳುವುದಾದರೆ ಬ್ಯಾಂಗ್ಲೂರು ಇನ್ಮುಂದೆ ಬೆಂಗಳೂರು...
ಇದೇ ಮಾತನ್ನು ನನ್ನ ಹಳ್ಳಿಯಲ್ಲಿ ಹೇಳುವುದಾದರೆ ಬೆಂಗ್ಳೂರು ಇನ್ಮುಂದೆ ಬೆಂಗಳೂರು ಎಂದು....

ಇಲ್ಲಿ ಬೆಂಗಳೂರು ಎಂಬ ಪದ ಮೂರು ಬೇರೆ ಬೇರೆ ವಾತಾವರಣದಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಗುರುತಿಸಿಕೊಳ್ಳುವುದು..
ಒಂದು ಸರ್ಕಾರದ ಅಧಿಕೃತ ದೃಷ್ಠಿಕೋನ...
ಇನ್ನೆರೆಡು ಸಮಯ, ಸಂಧರ್ಭ ಮತ್ತು ಸ್ಥಳಗಳನ್ನು ಆದರಿಸಿ ಹೆಸರನ್ನು ಉಚ್ಚರಿಸುವುದು..

ನಗರ ಒಂದೇ ಆದರು ಮೂರು ವಿಭಿನ್ನ ಉಚ್ಚರಣೆ ಪಡೆದಂತೆ ನಗರವು ಮೂರು ವಿಭಿನ್ನ ಸ್ಥರಗಳಲ್ಲಿ ತನ್ನ ವಿಭಿನ್ನ ಸ್ವರೂಪಗಳನ್ನು ಪಡೆದುಕೊಳ್ಳುತ್ತದೆ.

ಸರ್ಕಾರವು ತನ್ನ ಅಧಿಕೃತ ಅಧಿಕಾರಿಯುತ ವ್ಯಾಪ್ತಿಗೆ ಬರುವ ಬೆಂಗಳೂರನ್ನು ಗುರುತಿಸುವುದು textನ್ಡ ಕಡತಗಳ ಮೂಲಕ.
ನನ್ನ ಸ್ನೇಹಿತರ ಬಳಿ ನಾನು ಗುರುತಿಸುವ ಬ್ಯಾಂಗ್ಲೂರು ನಮ್ಮ ದೈನಿಂದಿಕ ಜೀವನದ ಜೊತೆ ಬೆರೆತಿರುವ ಇಂಗ್ಲೀಷ್ ಪ್ರಭಾವದೊಂದಿಗೆ ಬಂದಿರುವ ನಗರೀಕರಣ್ದದ ಪ್ರಭಾವದ ಬೆಂಗಳೂರನ್ನು.
ನನ್ನ ಹಳ್ಳಿಯಲ್ಲಿ ಗುರುತಿಸುವ ಬೆಂಗ್ಳೂರು ನಗರದ ದೈನಿಂದಿಕ ಜೀವನವಲ್ಲದ, ಯಾವತ್ತೋ ಒಮ್ಮೆ ಅಥವ ಬೆಂಗಳೂರಿಗೆ ವಿಸಿಟಿಂಗ್ ಸ್ಥಿತಿಯಿಂದ ಬದಲಾಗದ ಹಳ್ಳಿಗರಿಗೆ ಅಕಾಡೆಮಿಕ್ textಆಡು ಭಾಷೆಯಲ್ಲಿ ಪರಿವರ್ತವಾಗುವ ಉಚ್ಚಾರಣೆ ಮತ್ತು ಕಲ್ಪನೆಯ ಬೆಂಗ್ಳೂರು.

ಬ್ಯಾಂಗ್ಲೂರು ಬೆಂಗಳೂರು ಆಗಬೇಕೆಂದು ಪ್ರತಿಪಾದಿಸಿದಾಗ ಅದಕ್ಕೆ ಸಾಹಿತಿ ಯು.ಆರ್. ಅನಂತಮೂರ್ತಿ ಯವರು ದನಿಗೂಡಿಸಿದ್ದರು... ಆ ಸಂದರ್ಭದಲ್ಲಿ ಆಶೀಶ್ ನಂದಿಯವರು ತಮ್ಮ ಲೇಖನದಲ್ಲಿ ಆಕ್ಷೇಪಿಸಿ.. ಮಹಾನಗರಗಳ ಹೆಸರನ್ನು ಬದಲಾಯಿಸುವುದರಿಂದ ಆಗಬಹುದಾದ ಸ್ಥಿತ್ಯಂತರಗಳ ಬಗ್ಗೆ ಚರ್ಚಿಸಿದ್ದಾರೆ*.






ಹೀಗೆ ಮಹಾನಗರ ಹೆಸರಿನ ಮೂಲಕ ಗುರುತಿಸಿಕೊಳ್ಳುವುದರಲ್ಲಿ ಮತ್ತು ಬದಲಾಯಿಸಿಕೊಳ್ಳುವುದರಲ್ಲಿನ ಸ್ಥಿತ್ಯಂತರಗಳ ಬಗ್ಗೆ ಚರ್ಚಿಸುವಾಗ ನನಗೆ ಆಸಕ್ತಿಯಾಗಿ ಕಾಣುವುದು ಈ ಮಹಾನಗರ ಜನಪ್ರಿಯ ದೃಶ್ಯಮಾದ್ಯಮವಾದ ಚಲನಚಿತ್ರಗಳಲ್ಲಿ ಗುರುತಿಸಲ್ಪಡುತ್ತಿದ್ದ ಬ್ಯಾಂಗ್ಲೂರ್ ಮತ್ತು ಅಂದಿನ ಗ್ರಾಮಾಂತರವಾಗಿದ್ದ ನಗರದ ಸುತ್ತಮುತ್ತ ಹಳ್ಳಿಯ ಜನರು ನಗರಕ್ಕೆ ಕೆಲಸಗಳಿಗಾಗಿ ಬರುತ್ತಿದ್ದಂತಹವರು, ನಗರ ಮಹಾನಗರವಾಗಿ, ಅಂದಿನ ಹಳ್ಳಿಗಳು ಇಂದಿನ ಬೃಹತ್ ಬೆಂಗಳೂರಲ್ಲಿ ಬೆರೆತು ಹೋದವರ ದೈನಿಂದಿಕ ಜೀವನದಲ್ಲಿ ಅವರು, ಅವರಿಗೇ ಅರಿವಾಗದಂತೆ ಅಥವ ಅರಿವಿದ್ದೂ ಅದನ್ನು ನೆನಪಿಗಷ್ಟೇ ಉಳಿಸಿಕೊಳ್ಳಲು ಇಷ್ಟಪಡುವ, ನಿಧಾನವಾಗಿ ಬದಲಾಗುವ ಸ್ಥಿತ್ಯಂತರಗಳ ಬಗ್ಗೆ ನನ್ನ ಆಸಕ್ತಿ ಇರುವುದು.

ಹಿಂದೆ ಚಲನಚಿತ್ರಗಳ ಪ್ರಾರಂಭದ ದಿನಗಳಲ್ಲಿ ಚಲನಚಿತ್ರಗಳು ಬಹುತೇಕ ಸ್ಟುಡಿಯೋಗಳ ಒಳಗೆ ಚಿತ್ರಿತವಾಗುತ್ತಿತ್ತು. ಚಿತ್ರಗಳು ಆಗ ಸ್ಟುಡಿಯೋಗಳಿಗೆ ಹೋಗಿ ಅಲ್ಲಿ ಮೊದಲೆ ರೆಡಿಯಾಗಿರುತ್ತಿದ್ದ ಸ್ಟುಡಿಯೋಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಕ್ರಮೇಣ ಈ ಸ್ಟುಡಿಯೋಗಳ ಒಳಗೆ ಹಾಕಿರುತ್ತಿದ್ದು ಸೆಟ್ ಗಳಲ್ಲಿ ಚಿತ್ರೀಕರಣ ಮಾಡಲು ಏಕತಾನತೆ ಕಾಡತೊಡಗಿದ್ದಾಗ ಮತ್ತು ಸೆಟ್ ಗಳ ನಿರ್ವಹಣೆ ಅಪಾರ ವೆಚ್ಚವಾಗುತ್ತಿದ್ದಾಗ ಹೊರಾಂಗಣ ಚಿತ್ರೀಕರಣ ಹೆಚ್ಚು ಪ್ರಚಲಿತ , ಸುಲಭ ಮತ್ತು ಹೆಚ್ಚು ನಿಖರವಾದ ಹಿನ್ನಲೆಗಳು ಮೂಡತೊಡಗಿತು.

ಇಂತಹ ಸಂಧರ್ಭದಲ್ಲಿ ಚಿತ್ರಕಥೆಯು ಹೆಚ್ಚು ಸ್ಥಳ ನಿರ್ಧಿಷ್ಟತೆಯನ್ನು ಬಯಸಿದಾಗ ನಗರಗಳು ಆಗ ಹೆಚ್ಚು ಪರಿಚಿತ,ಪ್ರಚಲಿತವಿರುವ ಸ್ಥಳಗಳು cinematic identity ಪಡೆಯತೊಡಗಿತು. ಜನಸಾಮಾನ್ಯರನ್ನು ಅತಿ ಹೆಚ್ಚು ಬೇಗ ಆಕರ್ಶಿಸಿ, ಅವರ ಮೇಲೆ ಪ್ರಭಾವ ಬೀರಿದಂತ ಮಾದ್ಯಮ ಚಲನಚಿತ್ರ. ಇಂತಹ ಮಾದ್ಯಮದಿಂದಾಗಿ ಮುಂದೆ ನಗರಗಳಿಗೆ ಭೇಟಿ ಕೊಡುವವರಿಗೆ ಈ cinematic identity ಪಡೆದಂತಹ ಸ್ಥಳಗಳು visiting place ಆಗಿ, ಅವು ನಗರಗಳನ್ನು ಪ್ರತಿನಿದಿಸುವಂತ ಸ್ಥಳಗಳಾಗಿ ಮಾರ್ಪಟ್ಟಿತು.
ಸ್ವಾತಂತ್ರ್ತ್ಯ ಪೂರ್ವದಲ್ಲಿ ಬ್ರಿಟೀಷರಿಂದ ನಿರ್ಮಾಣಗೊಂಡ ಹೈಕೋರ್ಟು ಲಾಲ್ ಬಾಗ್ ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿ ಎಂ.ಜಿ.ರಸ್ತೆ ಮತ್ತು ಸ್ವಾತಂತ್ರ್ಯಾ ನಂತರ ನಿರ್ಮಾಣವಾದ ವಿಧಾನಸೌದ,ಕೆಂಪೇಗೌಡ ಬಸ್ ನಿಲ್ದಾಣ, ಯುಟಿಲಿಟಿ ಬಿಲ್ಡಿಂಗ್ ಬೆಂಗಳೂರನ್ನು ಪ್ರತಿನಿದಿಸ ತೊಡಗಿದವು, ಅಥವ ಬೆಂಗಳೂರಿಗೆ cinematic representative ಆಗಿ ಪರಿವರ್ತನೆಯಾಯಿತು.

ಮುಂದೆ ಬೆಂಗಳೂರಿನ ವಾತಾವರಣ ಔದ್ಯೋಗಿಕರಣ, ಐಟಿ-ಬಿಟಿಯ ಪ್ರಮುಖ ಕೇಂದ್ರಸ್ಥಾನವಾಗಿ ಬದಲಾದಂತೆ ಇಲ್ಲಿಗೆ ವಲಸಿಗರು ಬರುವುದೂ ಹೆಚ್ಚಾಗತೊಡಗಿತು.ಈ ವಲಸೆ ಮತ್ತು ಕಿರುತೆರೆಯಲ್ಲಿ ಖಾಸಗಿ ಚಾನೆಲ್ ಗಳು ಹೆಚ್ಚಾದಂತೆ ನಗರಗಳು ಹೆಚ್ಚು ಬೆತ್ತಲಾಗತೊಡಗಿದವು.





ಜಾಗತೀಕರಣದ ಕೊಡುಗೆಯಾದ, ವಲಸಿಗರು ಮತ್ತು ಕೈಗಾರಿಕೆಗಳು ಹೆಚ್ಚಾಗತೊಡಗಿದಂತೆ ನಗರ ತನ್ನ ಸುತ್ತಮುತ್ತ ಇದ್ದ ಕೃಷಿಚಟುವಟಿಕೆಯ ಜಮೀನಿನ ಜೊತೆಗೆ ಹಳ್ಳಿಗಳನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳತೊಡಗಿತು. ಹಳ್ಳಿಗಳು ನಗರವಾಯಿತು.

ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಬೆಂದಕಾಳೂರಾಗಿದ್ದ ಸಣ್ಣ ಊರು ಮುಂದೆ ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಂಗಳೂರಾಗಿ ಮಾರ್ಪಟ್ಟಿತು.. ಆದರೆ ಜಾಗತಿಕರಣದ ಪ್ರಭಾವದಿಂದಾಗಿ ಮಹಾನಗರದೊಳಗೆ ಸೇರಿ ಹೋದ ಹಳ್ಳಿಗಳಿಗೆ ಈ ಧೀರ್ಘ ಅಂತರವಿಲ್ಲದೆ ದಿಡೀರನೆ ಮಹಾನಗರದ ಭಾಗವಾಗಿ ಬದಲಾಯಿತು.
ಇಲ್ಲಿನ ಜನಜೀವನ ಕೆಲವೇ ವರ್ಷಗಳಲ್ಲಿ ಜಾಗತೀಕರಣಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಂಡರು.
ಹಸುಗಳನ್ನು ಸಾಕಿ ಮೇಯಿಸಿ ಅದರ ಹಾಲನ್ನು ಮನೆಗೆ ಬಳಸಿಕೊಳ್ಳುತ್ತಿದ್ದವರು ಪ್ಯಾಕೆಟ್ ಹಾಲಿಗೆ ಒಗ್ಗಿಕೊಂಡರು..
ನಗರಕ್ಕೆ ಬರಬೇಕಂದರೆ ವಿಶೇಷ ಆಸ್ಥೆ ತೋರಿಸುತ್ತಿದ್ದವರು, ಆ ಬಸ್ಸಿಗಾಗಿ ಕಾಯುತ್ತಿದ್ದವರು ಇಂದು ನಗರ ಸಾರಿಗೆ ಬಸ್ಸುಗಳಲ್ಲಿ ತೂರಾಡಿಕೊಂಡು, ಸೀಟ್ ಸಿಕ್ಕಿದ ತಕ್ಷಣ ನಿದ್ದೆಗೆ ಜಾರುವುದರಲ್ಲಿ ಬ್ಯುಸಿಯಾದರು.






ಈ ಜಾಗತೀಕರಣಕ್ಕೆ ಒಗ್ಗಿಕೊಂಡರು ತಮ್ಮ ಮೂಲದ ಪ್ರಭಾವದಿಂದ ಮಾನಸಿಕವಾಗಿ ಹೊರಬಂದಿಲ್ಲದಿರುವುದನ್ನು ಅವರ ದೈನಂದಿಕ ಜೀವನದಲ್ಲಿ, ಅವರ ಉಡುಗೆ ಜೀವನ-ತೊಡುಗೆ ಜೀವನ ಪದ್ದತಿಯಲ್ಲಿ ಮತ್ತು ಸಾಂಸ್ಕೃತಿಕವಾಗಿ ನೋಡಿದಾಗ, ಅವರು ಆಚರಿಸುತ್ತಿದ್ದ ಊರಹಬ್ಬಗಳು ಇಂದು ಏರಿಯಾಗೊಂದರಂತೆ ಆಚರಿಸುವುದರಲ್ಲಿ ಕಾಣಬಹುದು.
ಕೆಲಸಕ್ಕೆ ಹೋಗಿ ಬರುವ ಮಧ್ಯಮ ವರ್ಗದ ಗಂಡಸರು ಮನೆಗೆ ಬರ್ತಿದ್ದ ಹಾಗೆ ನೈಟ್ ಪ್ಯಾಂಟ್ ಹಾಕುವುದರ ಬದಲು ಲುಂಗಿ, ಪಂಚೆ ಉಡುವುದರಲ್ಲಿ ಕಾಣಬಹುದು.
ಜಾಗತೀಕರಣದ ಪ್ರಮುಖ ಲಕ್ಷಣವಾಗಿ ಕಾಣುವ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಸಂಸ್ಕೃತಿಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲಾಗದ ಈ ವರ್ಗದ ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್ ಮೇಲೆ ಚೂಡಿದಾರ್ ಟಾಪ್ ಹಾಕ್ಕೊಂಡು ಜೆಡೆ ಹೆಣೆದುಕೊಂಡಿರುವುದರಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.





ಈಗ ವಿಜ್ಙಾನ ಮತ್ತು ಐ.ಟಿ, ಬಿ.ಟಿ ಗಳ ನೆಲವೀಡು ’ಬ್ಯಾಂಗಲೋರ್’ ಎಂದು ಸಾರುವಾಗ ಗಮನಿಸಬೇಕಾದ ಅಂಶವೆಂದರೆ.. ಈ ’ಬ್ಯಾಂಗಲೋರ್’ ’ಬೆಂಗಳೂರಿನ’ ಜೀವಂತ ವಿಮರ್ಶೆ. ಮಹಾನಗರಗಳಿಗೆ ನಿರ್ಧಿಷ್ಟ ಐಡೆಂಟಿಟಿ ಇರುವುದಿಲ್ಲವಾದರು ಬ್ಯಾಂಗಲೂರಿನ ವಿಷಯದಲ್ಲಿ ಆ ಹೇಳಿಕೆ ಅಷ್ಟು ಸೂಕ್ತವೆನಿಸುವುದಿಲ್ಲವೇನೊ ಅಂತನಿಸುತ್ತದೆ.. ಕಾರಣ ಬೆಂಗಳೂರು ತನ್ನ ಸುತ್ತಲೂ ಬೆಳೆಯುತ್ತಿದ್ದು , ಅದು ಬೆಳೆದಂತೆಲ್ಲ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿರುವುದು ತನ್ನದೇ ಈ ಹಿಂದಿನ ಮೂಲರೂಪವಾದ ಹಳ್ಳಿಗಳನ್ನು ಮತ್ತು ಹಳ್ಳಿಗಳ ಸಂಸ್ಕೃತಿಯನ್ನು...

ಇದರಿಂದಾಗಿ ಇದು ಎಷ್ಟೇ ಮೆಟ್ರೋ ಪಾಲಿಟಿನ್ ನಗರವಾದರು ತನ್ನದೇ ಆದ ವಿಶಿಷ್ಠವಾದ ’ಹೊಸ ಸಾಂಸ್ಕೃತಿಕ ಗುರುತು’ cultural identity ಯನ್ನು ತನ್ನ ಹೆಸರಿನೊಂದಿಗೆ ಗುರುತಿಸಿಬಹುದಾಗಿದೆ. ಇದು ಈ ಹಿಂದೆ ಮತ್ತು ಈಗಿನ ಚಲನ ಚಿತ್ರಗಳ ಮೂಲಕ ಗುರುತಿಸಬಹುದಾದ, ದಕ್ಷಿಣ ಭಾರತವೆಂದರೆ ಮದರಾಸಿಗಳು ಎಂದು ಗುರುತಿಸಲ್ಪಡುತ್ತಿದ್ದ ಸ್ಥಿತಿಯಿಂದ ಬೆಂಗ್ಳೂರಿಯನ್ಸ್ ಎಂದು ಗುರುತಿಸಲ್ಪಡಲು ತೊಡಗಿರುವ ಐ.ಟಿ-ಬಿ.ಟಿ identity ಗಿಂತ ವಿಭಿನ್ನವಾದ identity.

*2007 ಡಿಸಂಬರ್ ತಿಂಗಳ ಮಯೂರ ಸಂಚಿಕೆಯಲ್ಲಿ ಜಿ.ರಾಜಶೇಖರ್ ರವರ ಒಂದು ಊರು ಎರೆಡು ಮನಃಸ್ಥಿತಿಗಳು ಲೇಖನ ನೋಡಿ.

Monday, April 19, 2010

ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು

ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ.

೭ ದಿನಗಳ ನಂತರ ಬರೆಯುತ್ತಿದ್ದೇನೆ.

ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು.


ಈ ಚಿತ್ರವನ್ನು ಬರೆದುಮೊನ್ನೆ ೧೩ ಕ್ಕೆ ಒಂದು ವರ್ಶವಾಯಿತು.. ಆಗ ವಿಷ್ಣುವರ್ಧನ್ ರವರ ಸಿನಿಮಾಗೆ ರಚಿಸುತ್ತಿದ್ದೇನೆ ಎಂಬ ಖುಶಿ ಮಾತ್ರವಿತ್ತೇ ಹೊರತು.. ಒಂದು ವರ್ಶದನಂತರ ಹೀಗೆ ನೆನಪಿಸಿಕೊಳ್ಳುತ್ತೇನೆ ಎಂದು ಎಣಿಸಿರಲಿಲ್ಲ.

ಈ ಚಿತ್ರವನ್ನು ಸಿನೆಮಾದಲ್ಲಿ ಒಂದು ಸಣ್ಣ ದೃಶ್ಯದಲ್ಲಿ ಬಳಸಿಕೊಳ್ಳಲಾಗಿದೆಯಾದರು... ಮರೆಯಲಾಗದ ನೆನಪನ್ನು ಮಾಡಿದೆ.

ಹಾಗೆ ಈ ಚಿತ್ರದಲ್ಲಿನ ಗರಗರನೆ ಹಾಡಿನಲ್ಲಿ ಬರುವ ಕಲಾವಿದನ ಪಾತ್ರವನ್ನು ನಾನು ಮಾಡಬೇಕಾಗಿತ್ತು...

ತೆರೆಯ ಹಿಂದೆಯೇ ಕೆಲಸ ಮಾಡಲು ಆಸಕ್ತಿ ಇದ್ದಿದ್ದರಿಂದ ಆ ಅವಕಾಶವನ್ನು ನಿರಾಕರಿಸಿದ್ದೆ.

ಆ ಪಾತ್ರವನ್ನು ಒಪ್ಪಿಕೊಂಡಿದ್ದರೆ ...

ನಾಲ್ಕು ದಿನಗಳು ವಿಷ್ಣುವರ್ಧನ್ ರೊಡನೆ ಮೈಸೂರಿನ ಲಲಿತಮಹಲ್ನಲ್ಲಿ ಚಿತ್ರೀಕರಣದಲ್ಲಿ ಕಳೆದ ದಿನಗಳು ಈಗ ಎಲ್ಲಾ ನೆನಪಾಗಿ ಕಾಡುತ್ತಿದೆ..

ಯೂಟ್ಯೂಬ್ನಲ್ಲಿ ಅಡ್ಡಾದುತ್ತಿದ್ದಾಗ ಸಿಕ್ಕಿದ್ದು..

ನಾನು ತುಂಬಾ ದಿನಗಳಿಂದ ನೋಡಲು ಕಾಯುತ್ತಿರುವ ಸಿನೆಮಾ ಇದು ಮರುದನಾಯಗನ್...

ಇದರ ವಿಶೇಷತೆಗಳು ಹಲವು...

ಅದರಲ್ಲಿ ಮುಖ್ಯವಾದುದು ಈ ಚಿತ್ರ ಬಿಡುಗಡೆಗೊಂಡರೆ... ವಿಷ್ಣುವರ್ಧನ್ ರವರ ಸಿನೆಮಾಗಳಲ್ಲಿ ಬಿಡುಗಡೆಯಾದ ಕೊನೆ ಸಿನೆಮಾ ಎಂಬ ಹೆಗ್ಗಳಿಕೆಯು ಆಪ್ತರಕ್ಷಕ ಸಿನೆಮಾದಿಂದ ಮರುದನಾಯಗನ್ ಪಾಲಾಗುತ್ತದೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ವಿಷ್ಣುವರ್ಧನ್ ರವರು ನಟಿಸಿದ್ದಾರೆ.

http://www.youtube.com/watch?v=ytQQm8J7PHY&feature=