Monday, April 19, 2010

ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು

ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ.

೭ ದಿನಗಳ ನಂತರ ಬರೆಯುತ್ತಿದ್ದೇನೆ.

ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು.


ಈ ಚಿತ್ರವನ್ನು ಬರೆದುಮೊನ್ನೆ ೧೩ ಕ್ಕೆ ಒಂದು ವರ್ಶವಾಯಿತು.. ಆಗ ವಿಷ್ಣುವರ್ಧನ್ ರವರ ಸಿನಿಮಾಗೆ ರಚಿಸುತ್ತಿದ್ದೇನೆ ಎಂಬ ಖುಶಿ ಮಾತ್ರವಿತ್ತೇ ಹೊರತು.. ಒಂದು ವರ್ಶದನಂತರ ಹೀಗೆ ನೆನಪಿಸಿಕೊಳ್ಳುತ್ತೇನೆ ಎಂದು ಎಣಿಸಿರಲಿಲ್ಲ.

ಈ ಚಿತ್ರವನ್ನು ಸಿನೆಮಾದಲ್ಲಿ ಒಂದು ಸಣ್ಣ ದೃಶ್ಯದಲ್ಲಿ ಬಳಸಿಕೊಳ್ಳಲಾಗಿದೆಯಾದರು... ಮರೆಯಲಾಗದ ನೆನಪನ್ನು ಮಾಡಿದೆ.

ಹಾಗೆ ಈ ಚಿತ್ರದಲ್ಲಿನ ಗರಗರನೆ ಹಾಡಿನಲ್ಲಿ ಬರುವ ಕಲಾವಿದನ ಪಾತ್ರವನ್ನು ನಾನು ಮಾಡಬೇಕಾಗಿತ್ತು...

ತೆರೆಯ ಹಿಂದೆಯೇ ಕೆಲಸ ಮಾಡಲು ಆಸಕ್ತಿ ಇದ್ದಿದ್ದರಿಂದ ಆ ಅವಕಾಶವನ್ನು ನಿರಾಕರಿಸಿದ್ದೆ.

ಆ ಪಾತ್ರವನ್ನು ಒಪ್ಪಿಕೊಂಡಿದ್ದರೆ ...

ನಾಲ್ಕು ದಿನಗಳು ವಿಷ್ಣುವರ್ಧನ್ ರೊಡನೆ ಮೈಸೂರಿನ ಲಲಿತಮಹಲ್ನಲ್ಲಿ ಚಿತ್ರೀಕರಣದಲ್ಲಿ ಕಳೆದ ದಿನಗಳು ಈಗ ಎಲ್ಲಾ ನೆನಪಾಗಿ ಕಾಡುತ್ತಿದೆ..

ಯೂಟ್ಯೂಬ್ನಲ್ಲಿ ಅಡ್ಡಾದುತ್ತಿದ್ದಾಗ ಸಿಕ್ಕಿದ್ದು..

ನಾನು ತುಂಬಾ ದಿನಗಳಿಂದ ನೋಡಲು ಕಾಯುತ್ತಿರುವ ಸಿನೆಮಾ ಇದು ಮರುದನಾಯಗನ್...

ಇದರ ವಿಶೇಷತೆಗಳು ಹಲವು...

ಅದರಲ್ಲಿ ಮುಖ್ಯವಾದುದು ಈ ಚಿತ್ರ ಬಿಡುಗಡೆಗೊಂಡರೆ... ವಿಷ್ಣುವರ್ಧನ್ ರವರ ಸಿನೆಮಾಗಳಲ್ಲಿ ಬಿಡುಗಡೆಯಾದ ಕೊನೆ ಸಿನೆಮಾ ಎಂಬ ಹೆಗ್ಗಳಿಕೆಯು ಆಪ್ತರಕ್ಷಕ ಸಿನೆಮಾದಿಂದ ಮರುದನಾಯಗನ್ ಪಾಲಾಗುತ್ತದೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ವಿಷ್ಣುವರ್ಧನ್ ರವರು ನಟಿಸಿದ್ದಾರೆ.

http://www.youtube.com/watch?v=ytQQm8J7PHY&feature=


3 comments:

  1. ವಿಷ್ಣು ಸರ್ ಜೊತೆ ಕೆಲಸ ಮಾಡೋ ಅದೃಷ್ಟ ನಿಮಗೆ ಸಿಕ್ಕಿತ್ತು
    ತುಂಬಾ ನೆನಪಿನಲ್ಲಿ ಬಾರೋ ನಟ ಅವರು
    ಕನ್ನಡ ಚಿತ್ರರಂಗಕ್ಕೆ ಅವರು ಕಣ್ಣು ಆಗಿದ್ರು
    ನಿಮ್ಮ ಚಿತ್ರಾನು ಚೆನ್ನಾಗಿದೆ

    ReplyDelete
  2. ವಿಷ್ಣು...ಒಂದು ಮಧುರ ಚಿರ ನೆನಪು...ನಿಮ್ಮ ಅದೃಷ್ಟ ತಪ್ಪಿದ್ದಕ್ಕೆ ನಮಗೂ ಖೇದವಿದೆ...ನಿಮ್ಮ ಲೇಖನಗಳನ್ನು ಮತ್ತೊಮ್ಮೆ ಓದುತ್ತೇನೆ...ನಮ್ಮಲ್ಲಿಗೂ ಬನ್ನಿ....http://www.jalanayana.blogspot.com

    ReplyDelete