ನಗರದ ಬಹುರಾಷ್ಟ್ರೀಯ ಕಂಪೆನಿ ಬಾಷ್ ತನ್ನ ಸಂಸ್ಥಾಪಕ ರಾಬರ್ಟ್ ಬಾಷ್ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರು ಕಲಾವಿದರಿಗೆ ಮತ್ತು 2 ಕಲಾ ಸಂಸ್ಥೆಗಳಿಗೆ ವಾರ್ಷಿಕ ಸಹಾಯಧನ ನೀಡಿ ಗೌರವ ಸಲ್ಲಿಸಿತು.
ಉದಯೋನ್ಮುಖ ಕಲಾವಿದರುಹಾಗೂ ಕಲಾಸಂಸ್ಥೆಗಳಿಗೆ ಒಟ್ಟು 8.25 ಲಕ್ಷ ರೂಪಾಯಿ ಮೊತ್ತವನ್ನು ಬಾಷ್ ವ್ಯವಸ್ಥಾಪಕ ನಿರ್ದೇಶಕ ಎಫ್. ಪಿಕಾರ್ಡ್ ನೀಡಿದರು. ಕಲಾವಿದರು 10 ತಿಂಗಳು ನಡೆಸುವ ಯೋಜನೆಗಳಿಗೆ ಈ ಮೊತ್ತ ಬಳಸಬಹುದು. ನಂತರ ವಿಶೇಷ ಸಮಾರಂಭದಲ್ಲಿ ಈ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.
ಛಾಯಾಗ್ರಹಣ ಮತ್ತು ವಿಡಿಯೋ ಕ್ಷೇತ್ರದಲ್ಲಿ ಸೋನಿಯಾ ಜೋಸ್, ಚಿತ್ರಕಲೆಗಾಗಿ ಎನ್. ಪರುಶುರಾಂ, ಸೈನ್‌ಬೋರ್ಡ್ ಕಲೆಗಾಗಿ ಎಸ್. ಮಂಜುನಾಥ್, ಸಾರ್ವಜನಿಕ ಕಲೆಗಾಗಿ ಎಸ್ ಗುರುರಾಜ್ ಛಾಯಾಗ್ರಹಣಕ್ಕಾಗಿ ಪತ್ರಿಕಾ ಛಾಯಾಗ್ರಾಹಕ ಸೆಲ್ವ ಕುಮಾರ್, ರಂಗಭೂಮಿಗಾಗಿ ರಾಮ್ ಗಣೇಶ್ ಅವರು ಅನುದಾನಕ್ಕೆ ಪಾತ್ರರಾದರು.
ಕಲಾಸಂಸ್ಥೆಗಳಾದ ನಂ.1 ಶಾಂತಿ ರೋಡ್ ಕಲಾಗ್ಯಾಲರಿ ಮತ್ತು ಅಟ್ಟಕಲರಿ ಕೂಡ ಬಾಷ್ ಗೌರವಕ್ಕೆ ಪಾತ್ರವಾದರು.
ಖ್ಯಾತ ಕಲಾವಿದರಾದ ಸುಮನ್ ಗೋಪಿನಾಥ್, ಸುರೇಶ್ ಜಯರಾಂ, ಸುರೇಖಾ, ಮೀನಾದೇವಿ, ಗಾಯತ್ರಿ ಕೃಷ್ಣನ್ ಹಾಗೂ ವಿವೇಕ್ ಧಾರೇಶ್ವರ್ ಕಲಾವಿದರ ಆಯ್ಕೆ ಸಮಿತಿಯಲ್ಲಿದ್ದರು. http://www.prajavani.net/Content/Sep242009/metrothurs20090923148040.asp
|
No comments:
Post a Comment