Saturday, August 25, 2012

ಏನೂ ಬದಲಾಗಲಿಲ್ಲ

ಅಂತು...
ಎರಡನೆಯ ವರ್ಷವು ಕಳೆಯಿತು..
ಏನೂ ಬದಲಾಗಲಿಲ್ಲ..
ಗಿಡ ಬೆಳೆದು ಟಿಸಿಲೊಡೆದಿದೆ..
ಭೂಮಿ ಎರಡು ವಸಂತಗಳನ್ನು
ಕಂಡಿತು..
ಏನೂ ಬದಲಾಗಲಿಲ್ಲ..
ಮನಸಿನಾಳದಲಿ ಹುದುಗಿರುವ..
ನೋವಿನ ನೆನಪುಗಳು..
ಆಗಾಗ ತನ್ನ ಇರುವನ್ನು
ತೋರಿಸುತ್ತಿದ್ದರು..
ಏನೂ ಬದಲಿಲ್ಲ..
ಕನಸಿನ ಗುರಿ ಸೇರಲಿಲ್ಲ...
ಮಾಡಬೇಕೆಂದಿದ್ದ
ಯಾವ ಕೆಲಸಗಳು ನೆರವೇರಲಿಲ್ಲ..
ಏನೂ ಬದಲಾಗಲಿಲ್ಲ..
ನನ್ನ ಪಯಣದ ಹಾದಿಯ ಬಿಟ್ಟು
ಏನೂ ಬದಲಾಗಲಿಲ್ಲ.

2 comments:

  1. ಮೂರನೇ ವರ್ಷಕ್ಕಾದರೂ.. ಆ ಕನಸುಗಳೆಲ್ಲ ಕೈ ಗೂಡಲಿ..
    ಶುಭ ಹಾರೈಕೆಗಳು...

    ReplyDelete
    Replies
    1. ನಿಮ್ಮ ಹಾರೈಕೆಯಂತೇ ಆಗಲಿ.. :-)

      Delete