ಇಂದು ಏಪ್ರಿಲ್ ೩೦
ಪಿತಾಜಿ...
ಹೋದ ವರ್ಷ ಇದೇ ದಿನ.. ಬೆಳ್ಬೆಳ್ಗೇನೆ ಕಾಲ್ ಮಾಡಿ ವಿಶ್ ಮಾಡಿದ್ರಿ... ಜೊತೆಗೆ ನಾನು ಹೇಳಿದಂತೆ.. ೧೦.೪೫ ಗು ಕಾಲ್ ಮಾಡಿ ವಿಶ್ ಮಾಡಿದ್ರಿ... happy birthday sir.. ಅಂತ.. ಜೊತೆಗೆ ದೇವಸ್ಥಾನಕ್ಕು ಹೋಗ್ಬಾ ಅಂತ ಹೇಳಿದ್ರಿ... ನನಗೆ ದೇವಸ್ಥಾನ ಅಂದ್ರೆ ಇಷ್ಟ ಆಗೋದಿಲ್ಲ ಅಂತ ಗೊತ್ತಿದ್ರು ರಿಕ್ವೆಸ್ಟ್ ಮಾಡ್ಕೊಂಡ್ರಿ... ಆದ್ರೆ ನಾನು ಹೋಗಲಿಲ್ಲ.. ಜೊತೆಗೆ ಹೋದ ವರ್ಷ ನಾನು ಸಿಕ್ಕಿಹಾಕ್ಕೊಂಡಿದ್ದ ಸುಳಿ ಕೂಡ ನನಗೆ ಹೋಗಲು ಬಿಡಲಿಲ್ಲವೆನೋ ನೆನಪಿಲ್ಲ.
ಹೋದ ವರ್ಷ ಅಂತಲ್ಲ ನಾನು ಮೊಬೈಲ್ ತಗೊಂದ ಮೇಲೆ ಒಂದು ವರ್ಷವೂ ನಿಮ್ಮೊಂದಿಗೆ ನಾನು ನನ್ನ birthday celebrate ಮಾಡ್ಕೊಳ್ದಿದ್ರು.. ನೀವು ಮಾತ್ರ ತಪ್ಪದೆ ಕಾಲ್ ಮಾಡಿ ವಿಶ್ ಮಾಡ್ತಿದ್ರಿ.
ಕಳೆದ ಕೆಲವು ವರ್ಷಗಳಿಂದ ನಾನು ನನ್ನ ಹುಟ್ಟಿದ ದಿನವನ್ನು ಸೆಲೆಬ್ರೇಟ್ ಮಾಡ್ಕೊಳ್ಲೋದು ಬಿಟ್ಟಿದ್ರುನು.. ನೀವ್ ವಿಶ್ ಮಾಡೋವರೆಗು ಕಾಯ್ತಿದ್ನೆ ಹೊರತು ನನಗೆ ನಾನು ದೊಡ್ದವನಾಗಿದ್ದೀನಿ ನನ್ನ ಜವಾಬ್ದಾರಿಗಳ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡ್ಬೇಕು ಅಂತ ಅನಿಸಿದ್ದೇ ಇಲ್ಲ..
ಅದಕ್ಕೆ ಕಾರಣ ನೀವು.. ನೀವು ಯಾವತ್ತು ನನಗೆ ಜವಾಬ್ದಾರಿಗಳ ಟೆನ್ಷನ್ ಕೊದಲೇ ಇಲ್ಲ..
ಎಲ್ಲವನ್ನು ನಿವೆ ನಿಭಾಯಿಸ್ತಿದ್ರಿ.. ಜೊತೆಗೆ ನನಗೆ ಏನೇ ಕಷ್ಟ ಬಂದ್ರು.. ನೀನ್ಯಾಕೆ ತಲೆಕೆಡಿಸ್ಕೊಳ್ತೀಯಾ ನಾನಿದೀನಲ್ಲ ಅಂತ ಹೇಳ್ತಿದ್ರಿ.. ಜೊತೆಗೆ ನನ್ನೆಲ್ಲ ಕೆಲಸಗಳಿಗೆ ಬ್ಯಾಕ್ ಬೋನ್ ಆಗಿ.. ನಾನು ನನ್ನದೆ ಆದ ಕನಸುಗಳ ಲೋಕದಲ್ಲಿ ಕಾಣುತ್ತಿದ್ದ ಗುರಿಗಳನ್ನು ಮುಟ್ಟಲು ಸಹಕರಿಸುತ್ತಿದ್ರಿ.
೨೦೦೪ ರಿಂದ ಸತತವಾಗಿ ೨೦೧೦ ರವರೆಗೆ ನಾನಾಗಿ ಫೋನ್ ಸ್ವಿಚ್ ಆಫ್ ಮಾಡ್ಕೊಂಡು ನಿಮಗೆ ಕಾಲ್ ಮಾಡ್ದಾಗ ಸಿಗದಿದ್ದ ಹೊರತು ನೀವೆಂದೂ ನನಗೆ ಫೋನ್ ಮಾಡೋದನ್ನ ತಪ್ಪಿಸಲಿಲ್ಲ. ನೀವು ಹಿಂದೆಲ್ಲಾ ಹಾಸ್ಪಿಟಲ್ನಲ್ಲಿ ಇದ್ದಾಗ ಕೂಡ.. ನಾನು ಬರೋದು ಸ್ವಲ್ಪ ತಡ ಆದ್ರು ಸಿಡುಕ್ತಿದ್ರಿ.. ಆದ್ರೆ ಈಬಾರಿ ಅದೇನೂ ಮಾಡಲಿಲ್ಲ.. ನಾನು ಬಂದಾಗಲು ಊರಿಗೆ ಹೊರಡೋಣ ಅಂತಿದ್ರಿ.. ಅಥವ ನಿನ್ನ ಕೆಲಸಗಳು ಏನಾದ್ರು ಇದ್ರೆ ನೋಡ್ಕೋಹೋಗು ನಾನು ಆರಾಮಾಗಿದ್ದೀನಿ ಅಂತಲೇ ಹೇಳಿದ್ರಿ. ಮೊದಲೆಲ್ಲ ನಾನು ನಿಮ್ಮನ್ನು ನೋಡಲು ಬಂದಾಗ ಇನ್ನೂ ಸ್ವಲ್ಪ ಹೊತ್ತು ಕೂತ್ಕೋ ಅಂತಿದ್ದೋರು ಈಬಾರಿ ಹೋಗು ಹೊರಟೋಗು ಅಂತ ಬಲವಂತವಾಗಿ ಕಳಿಸ್ಬಿಟ್ರಿ.. ಅದರಲ್ಲು ನನಗೆ ಈಗಲು ಕಾಡುತ್ತಿರುವ ಘಟನೆ ಹಾಸ್ಪಿಟಲ್ನಲ್ಲಿ ಕೊನೆಯಬಾರಿ ನನ್ನನ್ನು ನಾನಾಗಿ ಗುರುತಿಸಿ ಮಾತಾಡಿಸಿದ ದಿನವಂತೂ ಅಲ್ಲಿಗೆ ಬಂದಿದ್ದ ನಿಮ್ಮ ಮೊಮ್ಮಗನೊಂದಿಗೆ ಚೆನ್ನಾಗಿ ಮಾತಾಡಿದ್ರಿ.. ಕಂಚೇಪಲ್ಲಿಯ ಸರೋಜಮ್ಮನವರೊಂದಿಗೆ ಕೂಡ ಚೆನ್ನಾಗಿ ಮಾತಾಡಿದ್ರಿ.. ಅವರನ್ನು ಬಿಟ್ಟು ಒಳಬಂದಾಗ ನನ್ನೊಂದಿಗೆ ಮಾತಾಡದೆ ನನ್ನನ್ನು ಬಲವಂತವಾಗಿ ಕಳಿಸಿದ್ದೇಕೆ? ನಿಮ್ಮ ಪಥ್ಯದ ವಿಷಯದಲ್ಲಿ ತುಂಬ ಕ್ರೂರವಾಗಿ ನಡೆದುಕೊಂಡೆ ಅಂತಲಾ? ಅಥವ ನಿಮಗೆ ಸರಿಯಾದ ಸಮಯಕ್ಕೆ ನಿಮಗೆ ಟ್ರೀಟ್ಮೆಂಟ್ ಕೊಡಿಸದೆ ಉದಾಸೀನ ಮಾಡಿದೆ ಅಂತಲಾ? ಯಾಕೆ? ನನಗೆ ನನ್ನ ಜೀವನದ ಕೊನೆ ಕ್ಷಣದವರೆಗೂ ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ.
ಅದರ ಮಾರನೆಯ ದಿನ ನಿವು ನನ್ನನ್ನು ಇನ್ಯಾರೊ ಎಂಬಂತೆ ಗುರುತಿಸಿ ಮಾತಾಡಿಸಿದ್ದನ್ನು ರೆಕಾರ್ಡ್ ಮಾಡ್ಕೊಂಡಿರೊದನ್ನು ಕೇಳಿದ ಪ್ರತಿ ಸಲವೂ ಈ ಪ್ರಶ್ನೆ ನನಗೆ ಕಾಡುತ್ತಲೇ ಇರುತ್ತದೆ.
ನೀವು ನಿಮ್ಮ ಆರೊಗ್ಯ ಹದಗೆಡಲು ಪ್ರಾರಂಭಿಸಿದಂದಿನಿಂದ ನನಗೆ ಪ್ರೇರಕರಾಗಿ, ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ, ಗುರುವಾಗಿ... ಒಟ್ಟಾರೆ ನನಗೆ ನನ್ನ ಎಲ್ಲವೂ ಆಗಿ ನನಗಾಗಿ ನಿಮ್ಮನ್ನು ಮುಡುಪಿಟ್ಟುಕೊಂಡ್ರಿ.. ಆದ್ರೆ ಯಾವತ್ತು ನನ್ನನ್ನು ನಿಮಗೆ ಬೇಕಾದಮ್ತೆ ಬದಲಿಸಲು ಪ್ರಯತ್ನಿಸಲಿಲ್ಲ.. ನನ್ನ ಕನಸುಗಳಿಗೆ ನೀರು ಹಾಕಿ ಬೆಳೆಸುವುದರಲ್ಲೇ ಕೊನೆಯವರೆಗೂ ನಿಮ್ಮನ್ನು ಅರ್ಪಿಸಿಕೊಂಡ್ರಿ.. ಆದರೆ ನಿಮ್ಮ ಮಗನಾಗಿ ನಾನು ನಿಮಗಾಗಿ ಏನೂ ಮಾಡಲಾಗಲಿಲ್ಲ.. ನನ್ನ ಕನಸುಗಳು ನನಸಾಗುವ ಮೊದಲೆ ನೀವು ನನ್ನ್ನಿಂದ ದೂರ ಹೋಗ್ಬಿಟ್ರಿ.. ನೀವು ತೀರಿಕೊಂಡ ದಿನ ಅತ್ತಾಗ ನನ್ನೆದುರಿಗೆ ನಿಮ್ಮ ಭೌತಿಕ ದೇಹ ನನ್ನನ್ನು ಬಿಟ್ಟು ಹೋಯಿತು.. ಹಾಗೆ ನನ್ನೊಳಗಿನ ನಿಮ್ಮ ನೆನಪುಗಳನ್ನು ಹೀಗೆ ಬ್ಲಾಗಿನಲ್ಲಿ ಹಂಚಿಕೊಂಡರೆ ನನ್ನೊಳಗಿನ ನೆನಪುಗಳು ದೂರವಾಗುತ್ತೇನೋ ಎಂಬ ಭಯದಿಂದಾಗಿ ಇಷ್ಟು ದಿನ ಇಲ್ಲಿ ದಾಖಲಿಸಲು ಹಿಂದೇಟೂ ಹಾಕುತ್ತಿದ್ದೆ.
ಆದರೆ ಇಂದೇಕೋ ಹಾಗೆ ಅನಿಸದೆ.. ನಿಮ್ಮ ನೆನಪುಗಳನ್ನು ಇಲ್ಲಿ ದಾಖಲಿಸುತ್ತಾ ಹೋದಷ್ಟು ನಿಮ್ಮ ನೆನಪುಗಳು ಇನ್ನೂ ಆಳವಾಗಿ ನನ್ನೊಳಗೆ ಆವರಿಸಿಕೊಳ್ಳುತ್ತಿದೆ ಅಂತನಿಸುತ್ತಿದೆ.
ನನ್ನ ಅಸ್ತಿತ್ವವೇ ನೀವಾಗಿರುವಾಗ ನಿಮ್ಮ ನೆನಪುಗಳನ್ನು ಇದಿಷ್ಟರಲ್ಲೇ ದಾಖಲಿಸಲು ಸಾಧ್ಯವಾಗುವುದಿಲ್ಲವಲ್ಲ.
ಭಾವನಾತ್ಮಕವಾಗಿಯಷ್ಟೇ ಅಲ್ಲದೆ ನಿಜವಾಗಿಯೂ ನೀವು ನನ್ನೊಂದಿಗೇ ಇದೀರಿ ಅನ್ನೋದು ಒಂದೆರೆಡು ಘಟನೆಗಳ ಮೂಲಕ ಅನುಭವಕ್ಕೆ ಬಂದಾಗಿದೆ. ನಿಮ್ಮ ನೆನಪುಗಳೊಂದಿಗೆ ನಿಮಗೆ ನಾನು ಮಾತು ಕೊಟ್ಟಿದ್ದ ಕನಸುಗಳನ್ನು ಈಡೇರಿಸಲು ನಿಮ್ಮ ಆಶಿರ್ವಾದ ಬೇಡುತ್ತಾ ನನ್ನ ಜನ್ಮದಿನದ ಈ ದಿನವನ್ನು ಆರಂಭಿಸುತ್ತಿದ್ದೇನೆ.
ನಿಮ್ಮ ಮಗ
ಬಾಬು- ಮಂಜುನಾಥ್- ನಾನ್ನ