Tuesday, October 6, 2009

ಮನದಲ್ಲಿ ಮನೆ ಮಾಡಿದ ಮೇರುಕಲಾವಿದರಿಗೆ ರಂಗನಮನ

ಭಾನುವಾರದ ಸಂಜೆ ಮನದಲ್ಲಿ ಮರೆಯಲಾಗದ ಸಂಜೆಯಾದದ್ದು ಆಕಸ್ಮಿಕ.

ಬೇರ್ಯಾವುದೋ ಕೆಲಸದ ಕಾರಣದಿಂದಾಗಿ ಕಲಾಕ್ಷೇತ್ರದ ಕಡೆಗೆ ಹೋದಾಗ ಅದು ಮರೆಯಲಾಗದ ಸಂಜೆಯಾಗಬಹುದೆಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ನಾನು ಹೋಗಿದ್ದ ಕೆಲಸ ಮುಗಿಯುತ್ತಲೆ ವಾಡಿಕೆಯಂತೆ ರಂಗ ಗೆಳೆಯರನ್ನು ಭೇಟಿಮಾಡಲು ಸಂಸ ದ ಕಡೆಗೆ ಹೊರಟಾಗ ಅಲ್ಲಿ ಎಲ್ಲಾ ಬ್ಯುಸಿಯಾಗಿದ್ದರು...

ಅಲ್ಲೇ ಹಾದಿಯಲ್ಲಿ ಬೋರ್ಡ್ಮೇಲೆ ಪ್ರಕಾಶ್ ರೈ ಮತ್ತು ಉಮಾಶ್ರಿ ಯವರಿಗೆ ರಂಗ ಗೆಳೆಯರ ರಂಗನಮನ ಓದಿದ ಕೂಡಲೆ ಏನೂ ವಿಶೇಷ ಎಂದನಿಸಲಿಲ್ಲ .



ಎಲ್ಲಾ ಕಾರ್ಯಕ್ರಮಗಳಂತೆ ಇದೂ ಒಂದು ಎಂಬ ಸಾಮಾನ್ಯ ಬಾವದಲ್ಲಿ ಹೋದವನಿಗೆ ಅಲ್ಲಿ ಅಡಪರ ನಿರ್ದೇಶನದಲ್ಲಿ ಸಿದ್ದವಾಗಿದ್ದ ರಂಗಸಜ್ಜಿಕೆಯನ್ನು



ನೋಡುತ್ತಿದ್ದಂತೆ ಸ್ವಲ್ಪ ಸ್ವಲ್ಪವಾಗಿ ಆಸಕ್ತಿ ಹೆಚ್ಚುತ್ತಾ ಹೋಯಿತು... ಹಾಗೇ ವೇದಿಕೆಯ ಮೇಲಿದ್ದ ಬೋರ್ಡ್ನಲ್ಲಿ ಉಮಾಶ್ರಿ ಪ್ರಕಾಶ್ ರೈ ಹೆಸರನ್ನು ಪದೇ ಪದೇ ಓದುತ್ತಾ ಹೋದಂತೆ ಪ್ರಕಾಶ್ ರೈ



ಎಂಬ ಮೇರು ಕಲಾವಿದನನ್ನು ನೋಡಲು ಇನ್ನು ಕೆಲವೇ ಘಂಟೆಗಳು ಇವೆ ಎಂಬ ಭಾವ ಮನದಲ್ಲಿ ಮೂಡುತ್ತಿದ್ದಂತೆಯೇ ಒಮ್ಮೆಲೇ ರೋಮಾಂಚನವಾಯಿತು.. ಅದೇ ಹೊತ್ತಿಗೆ ಅಲ್ಲಿಗೆ ಬಂದ ನನ್ನ ರಂಗ ಗೆಳೆಯರಾದ

ಜಗ್ಗಣ್ಣ "ಏನಪ್ಪಾ ಮಂಜು ಆಗಲೇ ಬಂದ್ಬಿಟ್ಟಿದ್ದಿಯ ಕೊನೆಯವರೆಗೂ ಇರ್ತೀಯಲ್ಲಾ " ಅಂತಂದ್ರು..
ಹೂಂ ಇರ್ತೀನಣ್ನಾ ಎಂದು ಅಲ್ಲೇ ಕಲ್ಲು ಹಾಸಿನ ಮೇಲೆ ಕೂತೆ...


ಬೆಳಕು ಕರಗಿ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆಯೇ ವೇದಿಕೆಯ ಮೇಲೆ ಬೆಳಕಿನ ಬಣ್ಣಗಳ ಸಂಯೋಜನೆಯ ನಡುವೆ ರಂಗಸಜ್ಜಿಕೆಯ ರಂಗೇರತೊಡಗಿತು... ಕಾರ್ಯಕ್ರಮ ಸ್ವಲ್ಪ ತಡವಾಗಿ ಆರಂಭವಾದರು ಪ್ರಕಾಶ್ ರೈ ರವರನ್ನು ಕಾಣುವ ಕಾತರದಲ್ಲಿ ತಡ ಎನಿಸಲಿಲ್ಲ....



ರೈ ರವರು ವೇದಿಕೆಯ ಮೇಲೆ ಬರುತ್ತಿದ್ದಂತೆ ರೋಮಾಂಚನ ...


ಕಲೆಯಲ್ಲಿ ಹೆಮ್ಮರವಾಗಿ ಬೆಳೆದಿರುವ ಪ್ರಕಾಶ್ ರೈ ರವರನ್ನು ಕಣ್ಣಾರೆ ಕಂಡ ಆ ಸಂಜೆಯನ್ನು ಮರೆಯಲಾಗದ ಸಂಜೆಯನ್ನಾಗಿಸಿತು. "ಕಾಂಚಿವರಮ್" ಚಿತ್ರಕ್ಕಾಗಿ "ರಾಷ್ಟ್ರಪ್ರಶಸ್ತಿ"ಯನ್ನು ಪಡೆದ ಆ ಮೇರು ಕಲಾವಿದನಿಂದ ಮತ್ತಷ್ಟು ಉತ್ತಮ ಚಿತ್ರಗಳ ನಿರೀಕ್ಷೆಯಲ್ಲಿ....